ಹೆಲ್ಮೆಟ್ ಕಡ್ಡಾಯ ಕಾನೂನು ಮರುಪರಿಶಿಲಿಸಲು ಒತ್ತಾಯ

ಸಂಪುಟ: 
10
ಸಂಚಿಕೆ: 
06
Sunday, 31 January 2016

ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ ಕಾನೂನನ್ನು ಕರ್ನಾಟಕ ರಾಜ್ಯ ಸರ್ಕಾರ ಸಂಪೂರ್ಣವಾಗಿ ರಾಜ್ಯದ ಎಲ್ಲಾ ನಗರಗಳಲ್ಲಿ ಕಡ್ಡಾಯವಾಗಿ ಜಾರಿ ಮಾಡುವ ಆದೇಶವನ್ನು ಮರು ಪರಿಶಿಲಿಸಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ), ಸೆಂಟರ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣಕಾರರ ಫೆಡರೇಷನ್(ಸಿ.ಡಬ್ಲೂ.ಎಫ್.ಐ) ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕು ಸಮಿತಿಗಳು ತಹಶೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಕಾನೂನನ್ನು ಕಡ್ಡಾಯಗೊಳಿಸುವುದರಿಂದ ಅನುಕೂಲಕ್ಕಿಂತ ಅನಾನುಕುಲವೇ ಹೆಚ್ಚು. ನಮ್ಮಂತ ಬಿಸಿಲು ಹೆಚ್ಚಿರುವ ಪ್ರದೇಶದಲ್ಲಿ ಹೆಲ್ಮೆಟ್ ಕಡ್ಡಾಯದಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇವೆ, ಭ್ರಷ್ಟಚಾರ ಹೆಚ್ಚಾಗಳು ಕಾರಣವಾಗುವುದು ಅಷ್ಟೇಯಲ್ಲದೆ ಈ ಕಾನೂನು ಹೆಚ್ಚು ಮಹಾನಗರ ಪಾಲಿಕೆಗಳಂತಹ ಪ್ರದೇಶ, ಅತಿಹೆಚ್ಚು ಜನಸಂದಣಿ ಇರುವ, ಹೆಚ್ಚು ಅಪಘಾತವಾಗುವ ಪ್ರದೇಶಗಳಲ್ಲಿ ಮಾಡುವುದು ಸೂಕ್ತವಾಗಿದೆ.

ಕೇವಲ ಬೈಕ್ ಸವಾರರು ಮಾತ್ರವಲ್ಲದೆ ಹಿಂದೆ ಕುಳಿತವರು ಸಹ ಹೆಲ್ಮೆಟ್ ಹಾಕಬೇಕೆನ್ನುವುದು ಮಹಿಳೆಯರಿಗೆ, ಮಕ್ಕಳಿಗೆ, ವಯಸ್ಸಾಗಿರುವ ಹಿರಿಯರಿಗೆ ಅದು ಕಿರಿಕಿರಿಯಾಗುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಅದು ಇನ್ನೊಂದು ಅಪಾಯಕ್ಕೆ ಏಡೆಮಾಡಿಕೊಡುತ್ತದೆ. ಈ ಕಾನೂನು ಜಾರಿ ಮಾಡಬೇಕಾದರೆ ನಗರದ ವಿಸ್ತಿರಣಾ ಅದರ ವ್ಯಾಪ್ತಿಗಳು, ಜನಸಂಖ್ಯೆ, ದ್ವಿಚಕ್ರ ವಾಹನಗಳು ರಸ್ತೆಯ ಮೇಲೆ ಒಡಿಸುವಾಗ ಕನಿಷ್ಠ ವೇಗ, ಅಲ್ಲಿಯ ವಾತವರಣ, ಆ ಪ್ರದೇಶದ ಆರ್ಥಿಕ ವ್ಯವಹಾರಗಳನ್ನು, ರಸ್ತೆಗಳನ್ನು ಗಮನಿಸಿ ಜಾರಿಮಾಡಲು ಮುಂದಾಗಬೇಕೆಂದು ಆಗ್ರಹಿಸಿದರು.

ಈ ಕಾರಣವಾಗಿ ರಾಜ್ಯ ಸರ್ಕಾರ ಈ ಕಾನೂನ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿ ಅವರ ವರದಿ, ಸಂಘಟನೆಗಳ, ರಾಜಕೀಯ ಪಕ್ಷಗಳ ಮತ್ತು ಜನರ ಅಭಿಪ್ರಾಯವನ್ನು ಪರಿಗಣಿಸಬೇಕೆಂದು ಮನವಿ ಸಲ್ಲಿಸಿದರು.