ಕೃಷಿ ಉಳಿಸಿ, ಕೃಷಿಕನನ್ನು ಸಂರಕ್ಷಿಸಿ - ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಸಂಪುಟ: 
10
ಸಂಚಿಕೆ: 
05
Sunday, 24 January 2016

ಮಹದಾಯಿ ನ್ಯಾಯಾಧೀಕರಣಕ್ಕೆ ಸಾರ್ವಜನಿಕರಿಂದ ಸಾಮೂಹಿಕ ಅರ್ಜಿ ಚಳುವಳಿ

ಚಿಕ್ಕ ದೊಡ್ಡ ರೈತರೆಂದು ಭೇದ ಭಾವ ಮಾಡದೇ ಎಲ್ಲ ರೈತರ ಎಲ್ಲ ಕೃಷಿ ಸಾಲವನ್ನು ಒಂದು ಬಾರಿ ಮನ್ನಾ ಮಾಡಿ ರೈತರನ್ನು ಋಣಮುಕ್ತಗೊಳಿಸಬೇಕು. ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಮಾಡಲು ಡಾ|| ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಮಾಡಬೇಕು. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆಂಬ ಬೇಡಿಕೆಗಳ ಆಧಾರದಲ್ಲಿ ಸಿಪಿಐ(ಎಂ) ಹಾಗೂ ರೈತ-ಕಾರ್ಮಿಕ ಸಂಘಟನೆಗಳಿಂದ “ಕೃಷಿ ಉಳಿಸಿ, ಕೃಷಿಕನನ್ನು ಸಂರಕ್ಷಿಸಿ” ಸಹಿ ಸಂಗ್ರಹ ಅಭಿಯಾನ ಹಾಗೂ ಬೇಗ ನ್ಯಾಯವನ್ನು ನೀಡುವಂತೆ ಮಹದಾಯಿ ನ್ಯಾಯಾದೀಕರಣಕ್ಕೆ ಸಾರ್ವನಿಕರಿಂದ ಅರ್ಜಿ ಸಲ್ಲಿಸುವ ಕಾರ್ಯಕ್ರಮಕ್ಕೆ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ  ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ವ್ಹಿ.ಬಿ.ಮಾಗನೂರ ಸಹಿ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಸೊಪ್ಪಿನ ಮಾತನಾಡಿ ಫೆಬ್ರವರಿ 20ರ ವರೆಗೆ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ 10 ಸಾವಿರ ಸಹಿ ಸಂಗ್ರಹಿಸಿ ಮುಂಬರುವ ಲೋಕಸಭಾ ಅಧಿವೇಶನದ ವೇಳೆ ಸರಕಾರಕ್ಕೆ ರೈತರ ಹಕ್ಕೊತ್ತಾಯವನ್ನು ಸಲ್ಲಿಸಲಾಗುವುದು. ಈ ಭಾಗದ ನೀರಿನ ಗಂಭೀರತೆಯನ್ನು ಪರಿಗಣಿಸಿ ವಿಳಂಬ ಮಾಡದೇ ನ್ಯಾಯವನ್ನು ನೀಡುವಂತೆ ಮಹದಾಯಿ ನ್ಯಾಯಾದೀಕರಣಕ್ಕೆ ಸಾರ್ವನಿಕರಿಂದ ಸಾಮೂಹಿಕವಾಗಿ ಸಾವಿರಾರು ಅರ್ಜಿ ಹಾಕಿಸಲಾಗುವುದು ಈ ಕಾರ್ಯದಲ್ಲಿ ರೈತ-ಕಾರ್ಮಿಕ ಸಂಘಟನೆಗಳು ಬೆಂಬಲಿಸಲಿವೆ ಎಂದರು.

ಮುಖಂಡರಾದ ಜಿ.ಎಸ್.ಮಾದಾಪೂರ, ವಿ.ಎಸ್.ಕೆಂಚನಗೌಡ್ರ. ಆರ್.ಎಚ್.ಆಯಿ, ಬಿ.ಐ.ಈಳಿಗೇರ, ಮಹೇಶ ಪತ್ತಾರ, ಗಂಗಾಧರ ಗಾಡದ, ಗೂಳಪ್ಪ ಯಡ್ರಾವಿ, ಮಲ್ಲಪ್ಪ ತಟ್ಟಿ, ಜಗದೀಶ ಪಾಟೀಲ, ವಿನಾಯಕ ಕುರಬರ, ಮಾರುತಿ ಅಂಬಿಗೇರ ಮುಂತಾದವರು ಉಪಸ್ಥಿತರಿದ್ದರು.