Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಅತಿಥಿ ಉಪನ್ಯಾಸಕರ ಮುಂದುವರೆದ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
05
Sunday, 24 January 2016

ಅತಿಥಿ ಉಪನ್ಯಾಸಕರ ಬೇಡಿಕೆಗಳು ಈಡೇರದ ಪರಿಣಾಮವಾಗಿ ದಿನಾಂಕ ಜನವರಿ 12ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಅತಿಥಿ ಉಪನ್ಯಾಸಕರು ಹೋರಾಟಕ್ಕೆ ಮುಂದಾಗಿದ್ದು ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಮೆರಿಟ್ ಹಾಗೂ ರೋಸ್ಟರ್ ನಿಯಮದಂತೆಯೇ ತಮ್ಮನ್ನು ನೇಮಕ ಮಾಡಲಾಗಿದೆ. ಯುಜಿಸಿ ನಿಯಮಗಳಂತೆಯೇ ನೇಮಕಾತಿಯಾಗಿದ್ದು, ಹೀಗಿದ್ದರೂ ಸರ್ಕಾರ ನಮ್ಮನ್ನು ಖಾಯಂ ಮಾಡುತ್ತಿಲ್ಲ, ಭರವಸೆಗಳು ನೀಡಿದ್ದಾರೆ ವಿನಃ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ವಯಸ್ಸು ಮೀರುತ್ತಿದ್ದು ವಯೋಮಿತಿ ಮೀರಿದ ಮೇಲೆ ನಮ್ಮನ್ನು ಕೈಬಿಟ್ಟರೆ ಹೇಗೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಹೋರಾಟ ನಿರತ ಅತಿಥಿ ಉಪನ್ಯಾಸಕರು, ಸಾರ್ವಜನಿಕರ ಚಪ್ಪಲಿ, ಬೂಟ್ ಪಾಲೀಶ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಯಾದಗಿರಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಾಬುರಾವ ಚಿಂಚನಸೂರರವರಿಗೆ ಮನವಿ ಸಲ್ಲಿಸಿದ್ದಾರೆ. ಸಂಘದ ಜಿಲ್ಲಾಧ್ಯಕ್ಷತೆ ಡಾ||ಶೈಲಜಾ ಬಾಗೇವಾಡಿ, ಸಿದ್ಧಪ್ಪ ಗೌಡ, ಅಂಬರೀಶ ನಾಯಕ, ಗುರುರಾಜ ಕುಲಕರ್ಣಿ, ಜಗದೀಶ್ ತಂಬಾಕೆ, ಉಮೇಶ ಮಸಿಮಠ ಇತರರು ಭಾಗವಹಿಸಿದ್ದರು.

ಹಾವೇರಿಯಲ್ಲಿ ನಡೆದ ಧರಣಿ ಸ್ಥಳಕ್ಕೆ ಜೆಡಿಎಸ್‍ನಿಂದ ಬಸವರಾಜ ಹೊರಟ್ಟಿ, ಬಿಜೆಪಿಯಿಂದ ಸಿ.ಎಂ.ಉದಾಸಿ ಮತ್ತಿತರರು ಭಾಗವಹಿಸಿದ್ದರು. ಧರಣಿ ನೇತೃತ್ವವನ್ನು ರಾಜ್ಯ ಉಪಾಧ್ಯಕ್ಷರಾದ ವಸಂತಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷರಾದ ಜಿ.ಎಸ್.ಜ್ಯೋತಿ, ಜಿಲ್ಲಾ ಉಪಾಧ್ಯಕ್ಷರಾದ ಎಸ್.ವ್ಹಿ. ಗುಡಗೇರಿ, ಕಾರ್ಯದರ್ಶಿಗಳಾದ ಶಿದ್ದಪ್ಪನವರ, ಜಿಲ್ಲಾ ಮುಖಂಡರುಗಳಾದ ಶ್ರೀ ಸಿ. ಕೆ. ಪಾಟೀಲ, ಶ್ರೀ ಮಲ್ಲಿಕಾರ್ಜುನ ಕನ್ನೇಶ್ವರ, ಶ್ರೀಮತಿ ಭುವನೇಶ್ವರಿ, ಶ್ರೀಮತಿ ಸುಧಾ ಪಾಟೀಲ, ಜಗದೀಶ ಬಾರ್ಕಿ ಸೇರಿದಂತೆ ಜಿಲ್ಲೆಯ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಗೌರವ ಅಧ್ಯಕ್ಷರಾದ ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರಮೂರ್ತಿ, ರಾಜ್ಯಾಧ್ಯಕ್ಷರಾದ ಶ್ರೀನಿವಾಸಚಾರ್ ಎನ್., ಪ್ರಧಾನ ಕಾರ್ಯದರ್ಶಿ ಡಾ||ಮಲ್ಲಿಕಾರ್ಜುನ ಬಿ. ಮಾನ್ಪಡೆ, ಸೇರಿದಂತೆ ಹಲವು ಅತಿಥಿ ಉಪನ್ಯಾಸಕರು ಧರಣಿಯಲ್ಲಿ ಭಾಗವಹಿಸಿದ್ದರು. ರಾಮನಗರ ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ ಮುಂದುವರೆಯುತ್ತಿದ್ದು, ಬೇಡಿಕೆ ಈಡೇರಲೇಬೇಕೆಂದು ಆಗ್ರಹಿಸಿದ್ದಾರೆ.