ಲವ್‍ಲೀನ್ ಕೇಸ್: ಯುಡಿಎಫ್‍ನ ರಾಜಕೀಯ ದುರುದ್ದೇಶ

ಸಂಪುಟ: 
10
ಸಂಚಿಕೆ: 
04
Sunday, 17 January 2016

ಈ ಹಿಂದೆ ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರ ಲವ್‍ಲೀನ್ ಪ್ರಾಜೆಕ್ಟ್ ನಲ್ಲಿ ಹಗರಣ ನಡೆದಿದೆ ಎಂದು ಅದಕ್ಕೆ ಮೊದಲಿದ್ದ ಎಲ್‍ಡಿಎಫ್ ಸರಕಾರದಲ್ಲಿ ಮಂತ್ರಿಗಳಾಗಿದ್ದ ಪಿಣರಾಯಿ ವಿಜಯನ್ ಮೇಲೆ ಕೇಸು ಹಾಕಿತ್ತು. ಆದರೆ ನವಂಬರ್ 5, 2013ರಂದು  ಸಿಬಿಐ ಕೋರ್ಟ್ ಈ ಕೇಸಿನಲ್ಲಿದ್ದ ಆಪಾದನೆಗಳನ್ನು ತಿರಸ್ಕರಿಸಿ ಚಾರ್ಜ್‍ಶೀಟ್ ಹಾಕಲು ಯಾವುದೇ ಆಧಾರಗಳಿಲ್ಲ ಎಂದು ಅದನ್ನು ವಜಾ ಮಾಡಿತ್ತು. ಕುಪಿತಗೊಂಡ ಯುಡಿಎಫ್ ಸರಕಾರ ,ಇದರ ವಿರುದ್ಧ ಕೇರಳ ಹೈಕೋರ್ಟಿನಲ್ಲಿ ಪೆಬ್ರುವರಿ 2014ರಲ್ಲಿ ಹಾಕಿದ್ದ ಮರುಪರಿಶೀಲನಾ ಅರ್ಜಿ(ರಿವಿಶನ್ ಪಿಟಿಶನ್)ಯಲ್ಲಿ ತಾನೂ ಭಾಗಿ ಎಂದು ಸೇರಿಕೊಂಡಿತ್ತು. ಆದರೆ ನಂತರ ಏನೂ ನಡೆದಿರಲಿಲ್ಲ.

ಈಗ ಎರಡು ವರ್ಷಗಳ ನಂತರ ಸ್ವತಃ ಹಗರಣಗಳಿಂದ ತೀವ್ರ ಟೀಕೆ ಎದುರಿಸುತ್ತಿರುವ ಯುಡಿಎಫ್ ಸರಕಾರ  ಹೈಕೋರ್ಟ್‍ನಲ್ಲಿ ಈ ಬಗ್ಗೆ ಬೇಗನೇ ವಿಚಾರಣೆ ಆರಂಭಿಸಬೇಕು ಎಂದು ಅರ್ಜಿ ಸಲ್ಲಿಸಿದೆ.

ಇದು ಸ್ಪಷ್ಟವಾಗಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ನಡೆಸಿರುವ ರಾಜಕೀಯ ದುರುದ್ದೇಶದ ಕ್ರಮ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ.