Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಕೇರಳದಲ್ಲಿ ದ್ವೇಷದ ರಾಜಕಾರಣಕ್ಕೆ ಮತ್ತೊಮ್ಮೆ ತಿರಸ್ಕಾರ

Monday, 18 January 2016

ಕೋಮುವಾದಿ ಶಕ್ತಿಗಳ ಬೆದರಿಕೆಗಳಿಂದಾಗಿ ಮುಂಬೈ ಮತ್ತು ದಿಲ್ಲಿ ಕಾರ್ಯಕ್ರಮಗಳನ್ನು ರದ್ದು ಮಾಡಬೇಕಾಗಿ ಬಂದಿದ್ದ ನಮ್ಮ ಉಪಖಂಡದ ಪ್ರಖ್ಯಾತ ಗಝಲ್ ಗಾಯಕ ಉಸ್ತಾದ್ ಗುಲಾಂ ಅಲಿಯವರ ಸಂಗೀತ ಕಾರ್ಯಕ್ರಮಕ್ಕೆ ತಿರುವನಂತಪುರದಲ್ಲೂ ಅವರು ಪಾಕಿಸ್ತಾನದವರು ಎಂಬ ಏಕೈಕ  ಕಾರಣಕ್ಕೆ ಅಡ್ಡಿ ಉಂಟು ಮಾಡುವ ಸ್ಥಳೀಯ ಕೋಮುವಾದಿಗಳ ಪ್ರಯತ್ನ ಈ ಕಾರ್ಯಕ್ರಮಕ್ಕೆ ದೊರೆತ ಕೇರಳದ ಜನತೆಯ ಬೃಹತ್ ಸ್ಪಂದನದಿಂದಾಗಿ ಸಂಪೂರ್ಣ ವಿಫಲವಾಯಿತು.

ಸಂಗೀತ ಕಾರ್ಯಕ್ರಮದ ಮೊದಲು ನಡೆದ ಸನ್ಮಾನ ಸಮಾರಂಭದಲ್ಲಿ  “ನಾನು ಕಳೆದ 55ವರ್ಷಗಳಿಂದ ಹಾಡುತ್ತಿದ್ದೇನೆ. ಆದರೆ ನನ್ನ ಸಂಗೀತಕ್ಕೆ ಇಂತಹ ಪ್ರೀತಿಯನ್ನು ಹಿಂದೆಂದೂ ಕಂಡಿಲ್ಲ, ಅನುಭವಿಸಿಲ. ಇದು ನನ್ನ ಜೀವನದ ಅತ್ಯಂತ ಮಹತ್ವದ ದಿನ್ಲ” ಎಂದು ಗುಲಾಂ ಅಲಿ ಮನದುಂಬಿ ಹೇಳಿದರು. ಈ ಕಾರ್ಯಕ್ರಮಕ್ಕೆ ಮೊದಲು ಜನವರಿ 14ರಂದು ಅವರು ತಿರುವನಂಂತಪುರಕ್ಕೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯ ಎಂ.ಎ. ಬೇಬಿ ಅವರನ್ನು ಆದರದಿಂದ ಬರಮಾಡಿಕೊಂಡರು.

ಸನ್ಮಾನ  ಸಮಾರಂಭವೊಂದರಲ್ಲಿ ಕೇರಳದಲ್ಲಿ ಅವರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿರುವ ‘ಸ್ವರಲಯ’ದ ಮೊದಲ ‘ಗ್ಲೋಬಲ್ ಲೆಜೆಂಡರಿ ಅವಾರ್ಡ್’(ಜಾಗತಿಕ ಐತಿಹ್ಯ ಪ್ರಶಸ್ತಿ)ಯನ್ನು ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಮತ್ತು ರಾಜ್ಯ ಮುಖ್ಯಮಂತ್ರಿ ಒಮನ್ ಚಾಂಡಿ ಜಂಟಿಯಾಗಿ ನೀಡಿದರು

ಅವರನ್ನು ಅಭಿನಂದಿಸಿ ಮಾತನಾಡಿದ ರಾಜ್ಯದ ಹಿಂದಿನ ಮುಖ್ಯಮಂತ್ರಿ ಮತ್ತು ಹಿರಿಯ ಸಿಪಿಐ(ಎಂ) ಮುಖಂಡ ವಿ.ಎಸ್.ಅಚ್ಯುತಾನಂದನ್ “ಪಾಕಿಸ್ತಾನದವರಾದರೂ ಮಲೆಯಾಳಿಗಳಿಗೆ ಅವರು ಸೋದರನಿದ್ದಂತೆ. ಮೂರು ದಶಕಗಳ ಹಿಂದೆ ಕವಿ ಬಾಲಚಂದ್ರನ್ ಚುಲ್ಲಿಕ್ಕಾಡ್ ತಮ್ಮ ಕವಿತೆ ‘ಗಝಲ್’ ಮೂಲಕ ಗುಲಾಂ ಅಲಿಯವರ ಸಂಗೀತವನ್ನು ನಮ್ಮ ಕಿವಿಗಳಿಗೆ ಮುಟ್ಟಿಸಿದ್ದರು. ಸಂಘ ಪರಿವಾರದ ವಿಷಪೂರಿತ ಶಕ್ತಿಗಳು ಅವರು ಇಲ್ಲಿ ಹಾಡುವುದನ್ನು ವಿರೋಧಿಸಿ ನಮ್ಮ ನಾಡಿಗೆ ಅಪಖ್ಯಾತಿ ತಂದಿದ್ದಾರೆ. ಸಂಗೀತವನ್ನು ದ್ವೇಷಿಸುವವರು ಕ್ರಿಮಿನಲ್ ಭಾವದವರು ಎಂದು ಒಮ್ಮೆ ಶೇಕ್ಸ್‍ಪಿಯರ್ ಹೇಳಿದ್ದರಂತೆ” ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಕೇರಳದ ಮುಖ್ಯಮಂತ್ರಿಗಳು, ಈ ದಿನ ಕೇರಳದ ಜಾತ್ಯಾತೀತ ಮನಸ್ಸಿನ ಔನ್ನತ್ಯವನ್ನು ಸಾರಿದೆ, ದೀರ್ಘ ಸಾಂಸ್ಕøತಿಕ ಪರಂಪರೆಯನ್ನು ಎತ್ತಿಹಿಡಿದಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂ.ಎ.ಬೇಬಿ ಗುಲಾಂ ಅಲಿಯವರು ಇಲ್ಲಿ ಹಾಡುತ್ತಿರುವುದೇ ಒಂದು ಗಟ್ಟಿದನಿಯ ಸಾಂಸ್ಕøತಿಕ ಘೋಷಣೆ ಎಂದರು.

“ಮಾನವ ಜೀವಿಗಳ ಸೃಜನಶೀಲತೆಯ ಎದುರು ಇತಿಹಾಸದ ವಿವಿಧ ಘಟ್ಟಗಳಲ್ಲಿ ರೂಪುಗೊಂಡ ರಾಷ್ಟ್ರೀಯ ಗಡಿಗಳು ಕರಗಿ ಹೋಗುತ್ತವೆ. ಸಂಗೀತ, ಸಾಹಿತ್ಯ ಮತ್ತು ಕಲೆ ವಿಶ್ವವನ್ನು ಒಂದುಗೂಡಿಸುತ್ತವೆ. ವಸುಧೈವ ಕುಟುಂಬಕಂ ಎಂಬ ತತ್ವ ಈ ವಿಚಾರವನ್ನುಒಳಗೊಂಡಿದೆ. ಆದರೆ ಇದರ ವಿರುದ್ಧ ವರ್ತಿಸುವ ಕೆಲವು ಸಂಕುಚಿತ ಬುದ್ಧಿಯ ಜನಗಳು ಜಗತ್ತು ಸೃಜನಶೀಲತೆಯ ಮೂಲಕ ಒಂದಾಗುವುದನ್ನು ತಡೆಯುತ್ತಾರೆ. ಈ ಅಪಸ್ವರಗಳನ್ನು ಶುದ್ಧ ಸಂಗೀತದಿಂದ ಎದುರಿಸುವ ದೃಢ ನಿರ್ಧಾರ ಇಲ್ಲಿ ಗೆದ್ದಿದೆ” ಎಂದು ಬೇಬಿ ಹೇಳಿದರು. 

ಕೇರಳದ ಜನತೆ  ದ್ವೇಷದ ರಾಜಕಾರಣವನ್ನು  ತಿರಸ್ಕರಿಸಿದ್ದಾರೆ ಎನ್ನುತ್ತಾ ಅದಕ್ಕಾಗಿ ಕೇರಳದ ಜನತೆಯನ್ನು  ಸಿಪಿಐ(ಎಂ) ಅಭಿನಂದಿಸಿದೆ.

ಮೂರು ದಶಕಗಳ ನಂತರ ತನ್ನ ಕವಿತೆಯ ಹಿಂದಿನ ಸ್ವರದ ಭೇಟಿ

1984ರಲ್ಲಿಯೂ ಶಿವಸೇನೆ ಮುಂಬೈಯಲ್ಲಿ  ಗುಲಾಂ ಅಲಿಯವರಿಗೆ ಬೆದರಿಕೆ ಒಡ್ಡಿತ್ತು.. ಆ ಸಂದರ್ಭದಲ್ಲಿ ಆ ಗಝಲ್ ಉಸ್ತಾದರಿಗೆ ಸೌಹಾರ್ದ ವ್ಯಕ್ತಪಡಿಸಲು ಮಲೆಯಾಳಿ ಕವಿ ಬಾಲಚಂದ್ರನ್ ಚುಲ್ಲಿಕ್ಕಾಡ್ ಬರೆದ ಕವಿತೆ ‘ಗಝಲ್’. ಗುಲಾಂ ಅಲಿಯವರ ಪ್ರಖ್ಯಾತ ಗಝಲ್ ಹಾಡು “ಚುಪ್ಕೆ ಚುಪ್ಕೆ ರಾತ್ ದಿನ್.. .” 80ರ ದಶಕದಲ್ಲಿ ತಾನು ವಿದ್ಯಾರ್ಥಿಯಾಗಿದ್ದಾಗಲೇÀ ಆ ಉಸ್ತಾದರ ಅಭಿಮಾನಿಯಾದ ಬಾಲಚಂದ್ರನ್‍ರನ್ನು ಮತ್ತಷ್ಟು ಅವರತ್ತ ಸೆಳೆದಿತ್ತಂತೆ.

ಈಗ 31 ವರ್ಷಗಳ ನಂತರ ಅವರನ್ನು ಭೇಟಿಯಾಗುವ ಅವಕಾಶ ಜನವರಿ 14ರಂದು ಅವರಿಗೆ ಸಿಕ್ಕಿತು. ಮತ್ತೊಮ್ಮೆ ಮುಂಬೈಯಲ್ಲಿ ಗುಲಾಂಆಲಿಯವರಿಗೆ ಅದೇ ಶಿವಸೇನೆಯಿಂದ ಬೆದರಿಕೆ ಬಂದು ಕಾರ್ಯಕ್ರಮ ರದ್ದಾದ ಮೂರು ತಿಂಗಳ ನಂತರ. ತಮ್ಮ ಗಾಯನದಿಂದ ಸ್ಫೂರ್ತಿ ಪಡೆದು ಮಲೆಯಾಳಿ ಕವಿಯೊಬ್ಬರು ಕವಿತೆ ಬರೆದಿದ್ದರು ಎಂದು ಕೇಳಿ ಗುಲಾಂ ಅಲಿಯವರಿಗೆ ಅಪಾರ ಆನಂದವಾಯಿತಂತೆ. ಬಾಲಚಂದ್ರನ್ ಅದರ ಇಂಗ್ಲಿಷ್ ಅನುವಾದವನ್ನು ಕೊಟ್ಟರಂತೆ. ಜತೆಗಿದ್ದ ಅವರ ಮಗ ಆಮಿರ್ ಅಲಿ ಅದನ್ನು ತನ್ನ ತಂದೆಗಾಗಿ ಉರ್ದುಗೆ ಭಾಷಾಂತರಿಸಿ ಕೊಡುವುದಾಗಿ ಹೇಳಿದರಂತೆ.

ಈ ಕವಿತೆ ಗಝಲ್ ಪ್ರಾಕಾರ ಮೊದಲು ಸಮೃದ್ಧಿ ಕಂಡ ಪರ್ಸಿಯನ್ ಪ್ರದೇಶದಲ್ಲಿ ನಿರಾಶ್ರಿತರು ಎದುರಿಸುವ ಸಮಸ್ಯೆಗಳನ್ನು ವರ್ಣಿಸುತ್ತದೆ ಎಂದು ಪತ್ರಕರ್ತರಿಗೆ ಹೇಳಿದ ಬಾಲಚಂದ್ರನ್ “ಮೂರು ದಶಕಗಳ ನಂತರ ಅ ಕವಿತೆಯ ಹಿನ್ನೆಲೆ ಇನ್ನಷ್ಟು ಕರಾಳಗೊಂಡಿದೆ. ಆ ಪ್ರದೇಶ ರಕ್ತಸಿಕ್ತವಾಗಿದೆ, ಕೆಲವು ಸಾವಿರ ಇದ್ದ ನಿರಾಶ್ರಿತರ ಸಂಖ್ಯೆ ಮಿಲಿಯಗಳನ್ನು ದಾಟಿದೆ. ಈ ನಡುವೆ, ಭಾರತದಲ್ಲಿ ಹಿಂದುತ್ವ ಮತ್ತು ಅದರ ದ್ವೇಷದ ತತ್ವವಿಚಾರಗಳು ರಾಜಕಾರಣದ ಮುಖ್ಯ ಕಥನವಾಗಿ ಬಿಟ್ಟಿವೆ” ಎಂದರು(ಇಂಡಿಯನ್ ಎಕ್ಸ್‍ಪ್ರೆಸ್, ಜನವರಿ 16). ಆಗ ಕೇರಳದಲ್ಲಿ ಶಿವಸೇನೆ ಇರಲಿಲ್ಲ, ಈಗ  ಇಲ್ಲಿಗೂ ಬಂದಿದೆ ಎಂದು ವಿಷಾದಿಸಿದ ಅವರು, ವಿಷಮಯಗೊಂಡಿರುವ ಈಗಿನ ಸಾಮಾಜಿಕ ಹಂದರದ ಬಗ್ಗೆ ಇನ್ನೊಂದು ಕವಿತೆ ಬರೆಯಲಾರೆ, ಈಗಾಗುತ್ತಿರುವುದನ್ನು ವಿವರಿಸಲು ತನ್ನ ಬಳಿ ಪದಗಳಿಲ್ಲ, ಅದನ್ನು ಹೊಸ ತಲೆಮಾರಿನವರು ಪ್ರಯತ್ನಿಸಲಿ ಎಂದು ಉದ್ಗರಿಸಿದರಂತೆ.