ಹೈದರಾಬಾದ್ ವಿ.ವಿ: ಎಸ್ಎಫ್ಐ ರಂಗಕ್ಕೆ ಪ್ರಚಂಡ ಜಯ

ಸಂಪುಟ: 
9
ಸಂಚಿಕೆ: 
44
Friday, 4 December 2015

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಟಜಿಟ ಇತ್ತೀಚೆಗೆ ನಡೆದ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ ಎಸ್.ಎಫ್.ಐ. ನಾಯಕತ್ವದ ರಂಗ ಎಬಿವಿಪಿ (ಬಿಜೆಪಿ ಒಲವಿನ) ಮತ್ತು ಎನ್.ಎಸ್.ಯು.ಐ. (ಕಾಂಗ್ರೆಸ್ ಒಲವಿನ)ಗಳನ್ನು ಸೋಲಿಸಿ ಪ್ರಚಂಡ ಜಯ ಗಳಿಸಿದೆ.

ಎಸ್.ಎಫ್.ಐ. ನಾಯಕತ್ವದ ರಂಗದಲ್ಲಿ ಟಿ.ಎಸ್.ಎಫ್. (ಟ್ರೈಬಲ್ ಸ್ಟುಡೆಂಟ್ಸ್ ಫೋರಂ), ಡಿ.ಎಸ್.ಯು.(ದಲಿತ್ ಸ್ಟುಡೆಂಟ್ಸ್ ಯೂನಿಯನ್) ಇದ್ದು, ರಂಗಕ್ಕೆ ಟಿ.ವಿ.ವಿ. (ತೆಲಂಗಾಣ ವಿದ್ಯಾರ್ಥಿ ವೇದಿಕ) ಬೇಷರತ್ ಬೆಂಬಲ ನೀಡಿತ್ತು. ಎಸ್.ಎಫ್.ಐ. ನಾಯಕತ್ವದ ರಂಗ ಎಲ್ಲಾ ಆರು ಪದಾಧಿಕಾರಿ ಸ್ಥಾನಗಳನ್ನು ಪಡೆದಿದೆ. ಎಬಿವಿಪಿಗೆ ಸತತವಾಗಿ ಆರನೇ ವರ್ಷವೂ ಯಾವುದೇ ಪದಾಧಿಕಾರಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ. ಉನ್ನತ ಶಿಕ್ಷಣದ ಮೇಲೆ ಸರಕಾರದ ನವ-ಉದಾರವಾದಿ ದಾಳಿಯ ಹಿನ್ನೆಲೆಯಲ್ಲಿ ಇದೊಂದು ಗಮನಾರ್ಹ ವಿಜಯ.

SFI Hydrabad VVಎಸ್.ಎಫ್.ಐ. ನಾಯಕತ್ವದ ರಂಗ ಬರಿಯ ಚುನಾವಣೆಗಳಿಗಾಗಿ ಮಾಡಿದ ರಂಗವಲ್ಲ, ಕಳೆದ ಹಲವು ತಿಂಗಳುಗಳಲ್ಲಿ ಹೋರಾಟದ ರಂಗವೂ ಆಗಿತ್ತು. ವಿ.ವಿ. ಆಡಳಿತದ ಮೂಲಕ ಕೇಂದ್ರ ಸರಕಾರ ವಿ.ವಿ. ಕ್ಯಾಂಪಸ್ ಪ್ರಜಾಪ್ರಭುತ್ವದ ಮೇಲೆ ಮಾಡಿದ ದಾಳಿಯ ವಿರುದ್ಧ ಹೋರಾಟದಲ್ಲಿ ಹುಟ್ಟಿದ ರಂಗ ಇದಾಗಿತ್ತು. ಕ್ಯಾಂಪಸ್‌ನಲ್ಲಿ ಪೋಲಿಸ್ ಪಹರೆ/ಪೋಸ್ಟ್, ವಿದ್ಯಾರ್ಥಿಗಳ ಹಕ್ಕುಗಳ ನಿರ್ಬಂಧ, ಪ್ರವೇಶ ಪರೀಕ್ಷೆ ನಡೆಸಿದ ನಂತರ ಕೆಲವು ಕೋರ್ಸುಗಳನ್ನು ಕೈಬಿಟ್ಟದ್ದು, ಘಟಿಕೋತ್ಸವದಲ್ಲಿ ಡ್ರೆಸ್‌ಕೋಡ್, ಅಧ್ಯಾಪಕ ಮತ್ತು ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ – ಇತ್ಯಾದಿಗಳ ವಿರುದ್ಧ ಎಸ್.ಎಫ್.ಐ. ರಂಗ ಹೋರಾಟಕ್ಕೆ ಇಳಿದಿದ್ದು ಈ ಪ್ರಚಂಡ ಜಯಕ್ಕೆ ಕಾರಣವಾಗಿದೆ. ಈ ರಂಗ ಹೋರಾಟದ ರಂಗವಾಗಿ ಮುಂದುವರೆಯುತ್ತದೆ ಎನ್ನಲಾಗಿದೆ.