ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆಗೆ ಒತ್ತಾಯಿಸಿ ಚಳುವಳಿ

ಸಂಪುಟ: 
9
ಸಂಚಿಕೆ: 
45
Sunday, 1 November 2015

ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆಗೆ ಒತ್ತಾಯಿಸಿ ನವೆಂಬರ್ 16ರಂದು ರಾಜ್ಯ ಮಟ್ಟದ ಬೃಹತ್ ರಾಲಿ ಹಮ್ಮಿಕೊಳ್ಳಲಾಗಿದೆ.

ಅದರ ಮೊದಲ ಹಂತವಾಗಿ ಅಕ್ಟೋಬರ್ 30 ರಂದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಅರ್ಪಿಸುವ ಕಾರ್ಯಕ್ರಮಗಳು ನಡೆದಿರುವ ವರದಿಗಳು– ಗುಲ್ಬರ್ಗ, ಬೆಂಗಳೂರು, ಮಂಗಳೂರು, ಹಾಸನ, ಮುಂತಾದ ಹಲವು ಜಿಲ್ಲೆಗಳಿಂದ ಬಂದಿವೆ. ಕೆಲವು ಜಿಲ್ಲೆಗಳಲ್ಲಿ ತಾಲೂಕು ಮಟ್ಟದಲ್ಲೂ ಇಂತಹ ಚಳುವಳಿ ನಡೆಸಿರುವ ವರದಿಗಳು ಬಂದಿವೆ. ಹೆಚ್ಚಿನ ಜಿಲ್ಲೆಗಳಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮೆರವಣಿಗೆ, ಧರಣಿ, ಸಭೆ ನಡೆಸಿದ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಗಿದೆ. ಅಕ್ಟೋಬರ್ 30ಕ್ಕೆ ಪೂರ್ವಭಾವಿಯಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಲ್ಲಿಯೂ, ಸಾರ್ವಜನಿಕವಾಗಿಯೂ ವಿಚಾರ ಸಂಕಿರಣ, ಚರ್ಚೆ, ಧರಣಿ ಮುಂತಾದ ಕಾರ್ಯಕ್ರಮಗಳು ನಡೆದಿವೆ. ಬೆಂಗಳೂರಿನಲ್ಲಿ ಐಟಿ ಇಂಜಿನಿಯರುಗಳ ಗುಂಪೊಂದು ಮೌಢ್ಯಾಚರಣೆಗಳ ವಿರುದ್ಧ ಮತ್ತು ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆಗೆ ಬೆಂಬಲಿಸಿ ಪೋಸ್ಟರ್ ಪ್ರದರ್ಶನವನ್ನು ಏರ್ಪಡಿಸಿತ್ತು. ನವೆಂಬರ್ 16ರ ರಾಲಿಗೆ ಮುಂಚಿತವಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Hassan