ಮರ್ಯಾದೆಗೇಡಿ ಹತ್ಯೆ ವಿರೋಧಿ ಸಮಾವೇಶ

ಸಂಪುಟ: 
9
ಸಂಚಿಕೆ: 
44
Sunday, 25 October 2015

ತಮಿಳುನಾಡಿನ ಕುದ್ದಲೂರಿನಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿ ಹೆಚ್ಚುತ್ತಿರುವ ಮರ್ಯಾದೆಗೇಡಿ ಹತ್ಯೆಗಳ ವಿರುದ್ಧ ಸಮಾವೇಶವೊಂದನ್ನು ಸಂಘಟಿಸಿತ್ತು. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಸಮಾವೇಶವನ್ನು ಉದ್ಘಾಟಿಸಿದರು.  ಸಮಾವೇಶ ಅದೇ ಪಟ್ಟಣದ ಡಿ.ಎಸ್.ಪಿ.ಯಾಗಿದ್ದು ಸಂಶಯಾಸ್ಪದ ಸನ್ನಿವೇಶದಲ್ಲಿ ’ಆತ್ಮಹತ್ಯೆ’ ಮಾಡಿಕೊಂಡ ವಿಷ್ಣುಪ್ರಿಯಾ ಮರಣದ ಬಗ್ಗೆ ಶೋಕ ವ್ಯಕ್ತಪಡಿಸಿ ಆ ಬಗ್ಗೆ ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸಿದೆ. ವಿಷ್ಣುಪ್ರಿಯಾ ಮರ್ಯಾದೆಗೇಡಿ ಹತ್ಯೆಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಯೆಚುರಿ ವಿಷ್ಣುಪ್ರಿಯಾ ಮನೆಗೆ ಭೇಟಿ ಕೊಟ್ಟು ಆಕೆಯ ಪಾಲಕರನ್ನು ಸಂತೈಸಿದರು.