ಪ್ಯಾರಿಸ್‍ನಲ್ಲಿ ಬರ್ಬರ ಭತೋತ್ಪಾದನೆಗೆ ಮುಗ್ಧ ಜೀವಗಳ ಬಲಿ ಸಿಪಿಐ(ಎಂ) ಖಂಡನೆ

Sunday, 22 November 2015

France tererist attack

ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‍ನಲ್ಲಿ ನವಂಬರ್ 13 ರ ರಾತ್ರಿ ಆರು ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಈಗಾಗಲೇ 145ಕ್ಕೂ ಹೆಚ್ಚು ಮುಗ್ಧ ಜೀವಗಳು ಬಲಿಯಾಗಿವೆ. ಇದೊಂದು ಬರ್ಬರ ಭಯೋತ್ಪಾದನೆ ಎಂದು ಈಗ ದಿಲ್ಲಿಯಲ್ಲಿ ಸಭೆ ಸೇರಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಬಲವಾಗಿ ಖಂಡಿಸಿದೆ.

ಬಾಗ್ದಾದ್, ಬೈರೂತ್ ಮತ್ತು ಈಗ ಪ್ಯಾರಿಸಿನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗಳ ಉಬ್ಬರ ಅಮೆರಿಕಾ/ನಾಟೋ ಹಸ್ತಕ್ಷೇಪಗಳಿಗೆ ಸಂಬಂಧ ಪಟ್ಟಿರುವಂತೆ ಕಾಣುತ್ತವೆ ಎಂದಿರುವ ಸಿಪಿಐ(ಎಂ) ಈ ಭಯೋತ್ಪಾದಕ ದಾಳಿಗಳಲ್ಲಿ ಮುಗ್ಧ ಜನಗಳ ಸಾವಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.