ಟಿಪ್ಪು ಹುಟ್ಟು ಹಬ್ಬ

ಸಂಪುಟ: 
9
ಸಂಚಿಕೆ: 
47
Sunday, 15 November 2015

ಕರ್ನಾಟಕ ಸರಕಾರ ಟಿಪ್ಪು ಹುಟ್ಟು ಹಬ್ಬವನ್ನು ನವೆಂಬರ್ 10 ರಂದು ಅಧಿಕೃತವಾಗಿ ಆಚರಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಟಿಪ್ಪು ಹುಟ್ಟು ಹಬ್ಬವನ್ನು ನವೆಂಬರ್ 9 ರಂದು ಆಚರಿಸಲು ಕರೆ ಕೊಟ್ಟಿತ್ತು. ಟಿಪ್ಪು ಹುಟ್ಟು ಹಬ್ಬವನ್ನು ವಿಚಾರ ಸಂಕಿರಣ, ಸಾರ್ವಜನಿಕ ಸಭೆ ಮುಂತಾದವುಗಳ ಮೂಲಕ ಆಚರಿಸಲು ನಿರ್ಧರಿಸಿತ್ತು. ಈ  ಕರೆಯ ಮೇರೆಗೆ ಸಭೆ, ವಿಚಾರ ಸಂಕಿರಣಗಳ ಮೂಲಕ ಮೈಸೂರು, ಬೆಂಗಳೂರು, ತುಮಕೂರು, ಕೋಲಾರ, ಮಂಗಳೂರು, ಹಾಸನ, ಹಾವೇರಿ, ಸಿದ್ದಾಪುರ (ಉ.ಕ.)ಗಳಲ್ಲಿ ನಡೆದಿರುವ ವರದಿಗಳು ಬಂದಿವೆ. ಹಲವು ಕಡೆ ಇತರ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಜಂಟಿಯಾಗಿ ಸಂಘಟಿಸಲಾಗಿದೆ. ವಿಚಾರ ಸಂಕಿರಣಗಳಲ್ಲಿ ಪ್ರೊ. ಶೇಕ್ ಅಲಿ, ಪ್ರೊ. ವಿ.ನರಸಿಂಹಯ್ಯ, ಡಾ. ಸಿ.ಆರ್. ಗೋವಿಂದರಾಜು, ಡಾ. ಶಿವರಾಮಶೆಟ್ಟಿ ಮುಂತಾದ ಇತಿಹಾಸಕಾರರು ಚಿಂತಕರು, ಹಾಗೂ ಜಿ.ವಿ. ಶ್ರೀರಾಮರೆಡ್ಡಿ, ಜಿ.ಎನ್. ನಾಗರಾಜ್, ಕೆ. ಪ್ರಕಾಶ್ ಮುಂತಾದ ಪಕ್ಷದ ನಾಯಕರು ಮಾತನಾಡಿದರು.

ಈ ವಿಚಾರ ಸಂಕಿರಣಗಳಲ್ಲಿ ಮಾತನಾಡಿದವರು ಟಿಪ್ಪು ಮತಾಂಧ, ಕ್ರೂರ ಸುಲ್ತಾನ ಎಂಬ ಸಂಘ ಪರಿವಾರದ ಕುತ್ಸಿತ ಅಪಪ್ರಚಾರವನ್ನು, ಬಯಲಿಗೆಳೆದರು. ಇಂದಿನ ಪರಿಕಲ್ಪನೆಗಳನ್ನು ಬಳಸಿ ಟಿಪ್ಪು ವಿನ ಮೌಲ್ಯ ಮಾಪನಕ್ಕೆ ಇಳಿಯುವುದು ಸಲ್ಲ.,= ಅದು ಇತಿಹಾಸಕ್ಕೆ ಮಾಡುವ ಅಪಚಾರ ಎಂದರು.  ಅದೇ ಸಮಯದಲ್ಲಿ  ಅವರುಗಳು –  ರಾಜಿಯಿಲ್ಲದ ಬ್ರಿಟಿಶ್-ವಿರೋಧಿ ಹೋರಾಟಗಾರ; ಸಿಟಿಜನ್ ಟಿಪ್ಪು; ಧಾರ್ಮಿಕ ಸಮಭಾವ, ಉತ್ಪಾದನಾ ಶಕ್ತಿಗಳನ್ನು ಹಾಗೂ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಪ್ರಭುತ್ವದ ರೂಪಕ; ತಾತ್ವಿಕ ಚಿಂತಕ- ಮುಂತಾದ ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವವನ್ನು ಎತ್ತಿ ಹಿಡಿದರು.

  ಹಾಸನ