ಕೊಲ್ಕತಾದಲ್ಲಿ ಸಿಪಿಐ(ಎಂ) ಸಂಘಟನಾ ಪ್ಲೀನಂ: ಡಿಸೆಂಬರ್ 27-31, 2015

ಸಂಪುಟ: 
9
ಸಂಚಿಕೆ: 
48
Sunday, 22 November 2015

CPIM Plenam Logoಸಿಪಿಐ(ಎಂ)ನ ಸಂಘಟನಾ ಪ್ಲೀನಂ ವಿವರಗಳನ್ನು ಕೇಂದ್ರ ಸಮಿತಿ ಅಂತಿಮಗೊಳಿಸಿದೆ. ಇದು ಕೊಲ್ಕತಾದಲ್ಲಿ ಡಿಸೆಂಬರ್ 27-31 ರ ವರೆಗೆ ನಡೆಯಲಿದೆ. 436 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ಸಂಘಟನೆಯ ಬಗ್ಗೆ ಒಂದು ವರದಿಯನ್ನು ಮತ್ತು ಒಂದು ನಿರ್ಣಯವನ್ನು ಈ ಪ್ಲೀನಂನಲ್ಲಿ ಅಂಗೀಕರಿಸಲಾಗುವುದು. ಪಕ್ಷದ ಪ್ಲೀನಂ ಎಂದರೆ ಒಂದು ವಿಶೇಷ ಪ್ರಶ್ನೆಯನ್ನು ಆಮೂಲಾಗ್ರವಾಗಿ ಚರ್ಚಿಸಲು ಪಕ್ಷದ ಮಹಾಧಿವೇಶನ ಅಥವ ಅದರಲ್ಲಿ ಚುನಾಯಿತವಾದ ಕೇಂದ್ರ ಸಮಿತಿ ಕರೆಯುವ ಒಂದು ವಿಶೇಷ ಅಧಿವೇಶನ.

ವಿಶಾಖಪಟ್ಟಣಂನಲ್ಲಿ ಎಪ್ರಿಲ್ 2015ರಲ್ಲಿ ನಡೆದ ಸಿಪಿಐ(ಎಂ)ನ 21ನೇ ಮಹಾಧಿವೇಶನ ಇದುವರೆಗೆ ಪಕ್ಷ ಅನುಸರಿಸಿದ ರಾಜಕೀಯ-ಕಾರ್ಯತಂತ್ರಾತ್ಮಕ ಮಾರ್ಗದ ಪರಾಮರ್ಶೆಗೆ ಗಮನ ಕೇಂದ್ರೀಕರಿಸಿ ಹೊಸ ರಾಜಕೀಯ-ಕಾರ್ಯತಂತ್ರಾತ್ಮಕ ನಿಲುವು ಅಂಗೀಕರಿಸಿದೆ. ಇದನ್ನು ಅನುಷ್ಠಾನಕ್ಕೆ ತರಲು ಪಕ್ಷದ ಸಂಘಟನೆಗೆ ಮರು-ದಿಗ್ದರ್ಶನ ನೀಡಲು ಮತ್ತು ಸಜ್ಜುಗೊಳಿಸಲು ಸಾಕಷ್ಟು ಸಿದ್ಧತೆಯೊಡನೆ ಒಂದು ಪ್ರತ್ಯೇಕ ಸಭೆ ನಡೆಸಬೇಕಾಗಿದೆ ಎಂದು ಅನಿಸಿದ್ದರಿಂದ ಡಿಸೆಂಬರ್‍ನಲ್ಲಿ ಈ ಸಂಘಟನಾ ಪ್ಲೀನಂ ನಡೆಸಲು ನಿರ್ಧರಿಸಲಾಯಿತು.

cpim Plenamಸಿಪಿಐ(ಎಂ)ನ ಇತಿಹಾಸದಲ್ಲಿನ ಈ ಮಹತ್ವದ ಘಟನೆಯನ್ನು ಯಶಸ್ವಿಗೊಳಸಲು ಪಕ್ಷದ ಪಶ್ಚಿಮ ಬಂಗಾಲ ರಾಜ್ಯ ಸಮಿತಿ ವ್ಯಾಪಕ ಸಿದ್ಧತೆಗಳನ್ನು ಭರದಿಂದ ನಡೆಸುತ್ತಿದೆ. ಚಾರಿತ್ರಿಕ ಬ್ರಿಗೇಡ್ ಪರೇಡ್ ಗ್ರೌಂಡ್ಸ್‍ನಲ್ಲಿ ಡಿಸೆಂಬರ್ 27ರಂದು ಒಂದು ಬೃಹತ್ ರ್ಯಾಲಿಯೊಂದಿಗೆ ಈ ಪ್ಲೀನಂ ಆರಂಭವಾಗಲಿದೆ. ಈ ಸಾರ್ವಜನಿಕ ಸಭೆಯನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ಈ ಮೈದಾನದಲ್ಲಿನ ಒಂದು ಅತ್ಯಂತ ದೊಡ್ಡ ಸಭೆಯಾಗಿ ಮಾಡಲು ಸಿದ್ಧತೆಗಳು ನಡೆದಿವೆ.

ಡಿಸೆಂಬರ್ 1ರಿಂದ 6ರ ವರೆಗೆ, ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳು ದೇಶಾದ್ಯಂತ ಆರೆಸ್ಸೆಸ್/ಬಿಜೆಪಿ ಹರಿಯ ಬಿಟ್ಟಿರುವ ಕೋಮುವಾದಿ ಅಸಹಿಷ್ಣುತೆ ಮತ್ತು ದ್ವೇಷ ಹೆಚ್ಚುತ್ತಿರುವುದರ ವಿರುದ್ಧ ಒಂದು ತೀವ್ರತರವಾದ ಪ್ರಚಾರಾಂದೋಲನ ನಡೆಸಬೇಕೆಂಬ ಅಖಿಲ ಭಾರತ ಕರೆಯನ್ನು ಅನುಷ್ಠಾನಗೊಳಿಸುತ್ತವೆ.

 

cpim west bengal

ಇದಕ್ಕೆ ಮೊದಲು, ಪಶ್ಚಿಮ ಬಂಗಾಲ ರಾಜ್ಯ ಮಟ್ಟದಲ್ಲಿ 113 ಎಡ ನೇತೃತ್ವದ ಸಾಮೂಹಿಕ ಸಂಘಟನೆಗಳು ಒಟ್ಟು ಸೇರಿ ರಚಿಸಿಕೊಂಡಿರುವ ‘ಬಂಗಾಲ ಸಾಮೂಹಿಕ ಸಂಘಟನೆಗಳ ವೇದಿಕೆ’(ಬಿಪಿಎಂಒ) ನವಂಬರ್ 14ರಿಂದ 22 ರ ವರೆಗೆ ರಾಜ್ಯಾದ್ಯಂತ ಜಾಥಾಗಳನ್ನು ನಡೆಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಈ ಜಾಥಾಗಳು ರಾಜ್ಯದ 77242 ಚುನಾವಣಾ ಮತಗಟ್ಟೆಗಳಲ್ಲಿ 64222 ಮತಗಟ್ಟೆಗಳನ್ನು ತಲುಪುತ್ತವೆ. ಸುಮಾರು 17ಲಕ್ಷ ಸಂಗಾತಿಗಳು ಈ 11269 ಜಾಥಾಗಳಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಅವಧಿಯಲ್ಲಿ 11313 ಸಾಮೂಹಿಕ ಸಭೆಗಳನ್ನು ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ನಡೆಸಲಾಗುವುದು. ಇದು ಎಡಪಕ್ಷಗಳು 15 ಬೇಡಿಕೆಗಳ ಮೇಲೆ ಆರಂಭಿಸಿರುವ ಹೋರಾಟದ ಭಾಗವಾಗಿದ್ದು ಸ್ಥಳೀಯ ಪ್ರಶ್ನೆಗಳನ್ನೂ ಎತ್ತಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಮುಖ್ಯ ಒತ್ತು ತೃಣಮೂಲ ಕಾಂಗ್ರೆಸ್ ಮತ್ತು ಅದರ ಸರಕಾರ ಹಿಂಸಾಚಾರ, ಬೆದರಿಕೆ ಮತ್ತು ಭಯೋತ್ಪಾದನೆ ಹರಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ನಡೆಸಿರುವ ದಾಳಿಯನ್ನು ಪ್ರತಿರೋಧಿಸುವುದು. ಜತೆಗೆ ಜಾತ್ಯಾತೀತತೆಯನ್ನು ಕಾಪಾಡಿಕೊಳ್ಳುವ ಮತ್ತು ಬಲಪಡಿಸುವ ಹಾಗೂ ಜನತೆಯ ಮೇಲೆ ಸತತವಾಗಿ ಹೇರುತ್ತಿರುವ ಆರ್ಥಿಕ ಹೊರೆಗಳನ್ನು ಪ್ರತಿರೋಧಿಸುವ ಪ್ರಶ್ನೆಗಳು ಈ ಕಾರ್ಯಕ್ರಮದ ಮೂರು ಪ್ರಧಾನ ಪ್ರಶ್ನೆಗಳಾಗಿರುತ್ತವೆ.