ಕೈಕಳಕೊಂಡವರು ಆಸ್ಪತ್ರೆಯಿಂದ ಬರುವ ಮೊದಲೇ ಬಿಡುಗಡೆ

ಸಂಪುಟ: 
9
ಸಂಚಿಕೆ: 
47
Sunday, 15 November 2015

ಸರಕಾರದ ನೀತಿಗೆ ಆದಿವಾಸಿ ಸಮನ್ವಯ ಸಮಿತಿ ಟೀಕೆ : ಆದಿವಾಸಿ ಸುಂದರ ಮಲೆಕ್ಕುಡಿಯರ ಮೇಲೆ ದೌರ್ಜನ್ಯವೆಸಗಿ ಆತನ ಕೈಕಡಿದು, ಬೆರಳು ಕತ್ತರಿಸಿ, ಗಾಯದ ಮೇಲೆ ಮೆಣಸಿನ ಹುಡಿ ಹಾಕಿ ತನ್ನ ವಿಕೃತ ಮನಸ್ಸನ್ನು ಬಹಿರಂಗಗೊಳಿಸಿದ ಆರೋಪಿ ಗೋಪಾಲ ಕೃಷ್ಣ ಗೌಡ ಮತ್ತು ಅವರ ಸಂಗಡಿಗರಿಗೆ ಜಾಮೀನು ದೊರೆಯುವಂತೆ ಸಣ್ಣ ಮಟ್ಟನ ಕೇಸ್ ಹಾಕಿ ವಂಚನೆ ಮಾಡಿದ ರಾಜ್ಯದ ಕಾಂಗ್ರೇಸ್ ಸರಕಾರದ ಬಡ ಆದಿವಾಸಿ ವಿರೋದಿ ನೀತಿಯನ್ನು ಖಂಡಿಸಿದೆ.

ಗೋಪಾಲ ಕೃಷ್ಣ ಗೌಡರಿಗೆ ಜಾಮೀನು ದೊರೆತು ಪುನಃ ಆದಿವಾಸಿಗಳ ಮೇಲೆ ದಾಳಿ ಮಾಡಲು ಅವಕಾಶ ಮಾಡಿದ ಸರಕಾರದ ಮೃದುದೋರಣೆಯ ನೀತಿಯನ್ನು ಕರ್ನಾಟಕ ಆದಿವಾಸಿ ಹಕ್ಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಘಟಕದ ಅದ್ಯಕ್ಷ ವಸಂತ ನಡ, ಕಾರ್ಯದರ್ಶಿ ವಿಠಲ ಮಲೆಕುಡಿಯ, ಸಂಘಟನಾ ಕಾರ್ಯದರ್ಶಿಗಳಾದ ಜಯಾನಂದ ಎಂ.ಕೆ., ಮತ್ತು ಸದಾಶಿವ ಎಂ.ಕೆ. ಮುಖಂಡರುಗಳಾದ ಸುಂದರ ಎಂಕೆ, ನೆರಿಯಾ, ಪೂರ್ಣೇಶ್ ನೆರಿಯಾ, ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ಆರೋಪಿಗಳ ಮೇಲೆ ಗೂಂಡಾಕಾಯ್ದೆ ಹಾಕಬೇಕು, ಅವರ ಅನಧಿಕೃತ ಭೂಮಿಯನ್ನು ಸ್ವಾದೀನ ಪಡಿಸಬೇಕು ಎಂಬ ಆದಿವಾಸಿಗಳ ಬೇಡಿಕೆಗಳಿಗೆ ಮೌನವಿರುವ ಸರಕಾರ ಬಿಜೆಪಿ ಮುಖಂಡರ ರಕ್ಷಣೆಯಲ್ಲಿದ್ದ ಆರೋಪಿಗಳಿಗೆ ಸಹಾಯ ಮಾಡಲು ಮುಂದಾಗಿರುವುದು ಬೇಸರದ ವಿಚಾರ ಎಂದರು. ಸರಕಾರದ ಈ ನೀತಿಯನ್ನು ಖಂಡಿಸಿ ಡಿಸೆಂಬರ್ 1 ರಂದು ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದೂ ಅವರು ಹೇಳಿದರು. ಅದೇ ರೀತಿ ಆರೋಪಿಗಳು ಹಲ್ಲೆಗೊಳಗಾದ ಸುಂದರ ಮಲೆಕುಡಿಯರ ಮೇಲೆ ಸುಳ್ಳು ಕೇಸ್ ಹಾಕುವುದನ್ನು ವಿರೋದಿಸಿ, ಕೈ ತುಂಡಾದರೂ ಇಂತಹ ಘಟನೆಯೇ ಆಗಿಲ್ಲ ಎಂದು ಮೇಲ್ಮನವಿಗೆ ಕಠಿಣ ವಿರೋದ ವ್ಯಕ್ತಪಡಿಸುವ ಕೆಲಸಗಳನ್ನೂ ಸರಕಾರ ಮಾಡಬೇಕೆಂದೂ ಅವರು ಒತ್ತಾಯಿಸಿದರು.