ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆ : ರಭಸದ ಪ್ರಚಾರ

ಸಂಪುಟ: 
9
ಸಂಚಿಕೆ: 
44
Sunday, 25 October 2015

Kerala local body electionನವೆಂಬರ್ ಮತ್ತು 5 ರಂದು ಎರಡು ಸುತ್ತಿನ ಚುನಾವಣೆಗಳಲ್ಲಿ ಕೇರಳದ 2.5 ಕೋಟಿ ಜನತೆ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಚುನಾಯಿಸಲಿದ್ದಾರೆ. 14 ಜಿಲ್ಲಾ ಪರಿಷತ್‌ಗಳ 331 ವಾರ್ಡುಗಳಿಗೆ, 152 ಬ್ಲಾಕ್ ಪಂಚಾಯತುಗಳ 2078 ವಾರ್ಡುಗಳಿಗೆ, 941 ಗ್ರಾಮ ಪಂಚಾಯತ್‌ಗಳ 15,962 ವಾರ್ಡುಗಳಿಗೆ, 86 ಮುನಿಸಿಪಾಲಿಟಿಗಳ 3088 ವಾರ್ಡುಗಳಿಗೆ, 6 ಕಾರ್ಪೊರೇಶನುಗಳ 414 ವಾರ್ಡುಗಳಿಗೆ-ಚುನಾವಣೆ ನಡೆಯಲಿದೆ. ಕಳೆದ (2010) ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕತ್ವದ ಯು.ಡಿ.ಎಫ್. ಶೇ. 60 ಬ್ಲಾಕ್ ಪಂಚಾಯತುಗಳನ್ನು  ಗೆದ್ದಿದ್ದು, ಈ ಬಾರಿ ಅದನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ.

ಎಲ್.ಡಿ.ಎಫ್.ಗೆ ಜಯ ತಪ್ಪಿಸಲು ಕಾಂಗ್ರೆಸ್ ಹೊಸ ತಂತ್ರ ಹೂಡಿದೆ. ಮೂರನೇ ರಂಗವೊಂದನ್ನು ಹೂಡಿದರೆ ಯು.ಡಿ.ಎಫ್.ಅಲ್ಪ ಮತಗಳ ಅಂತರದಲಿ ಗೆಲ್ಲಬಹುದು ಎಂದು ಆಸೆ. ಎಸ್.ಎನ್.ಡಿ.ಪಿ. ಮೂಲಕ ಬಿಜೆಪಿಗೆ ’ಹಿಂದೂವಾದಿ’ ಮೂರನೇ ರಂಗ ರಚಿಸುವಂತೆ ಕುಮ್ಮಕ್ಕು ನೀಡುತ್ತಿದೆ. ಎಸ್.ಎನ್.ಡಿ.ಪಿ.ಯ ಭ್ರಷ್ಟ ನಾಯಕ ನಟೇಶನ್ ಮೂಲಕ ಅದನ್ನು ಮಾಡಲಾಗಿದೆ. ನಟೇಶನ್ ಈ ಮೂರನೇ ರಂಗದ ನಾಯಕ ಎಂದು ಬಿಂಬಿಸಲಾಗುತ್ತಿದೆ. ಈ ರಂಗದಲ್ಲಿ ಇತರ ಜಾತಿಯ ಪಕ್ಷಗಳನ್ನು ಸೇರಿಸಿಕೊಂಡು ಉತ್ತರ ಭಾರತದಲ್ಲಿ ಸಾಮಾಜಿಕ ಇಂಜಿನಿಯರಿಂಗ್ ಮೂಲಕ ಚುನಾವಣೆ ಗೆಲ್ಲಬಹುದು ಎಂದು ಅವರ ಹವಣಿಕೆ. ಆದರೆ ಎನ್.ಎಸ್.ಎಸ್, ವಿಶ್ವಕರ್ಮ ಸಭಾ, ದೀವರ ಸಭಾಗಳು ಆರೆಸ್ಸೆಸ್/ಬಿಜೆಪಿ ಜತೆ ಹೋಗಲು ನಿರಾಕರಿಸಿವೆ. ಎಸ್.ಎನ್.ಡಿ.ಪಿ.ಯ 6.5 ಸಾವಿರ ಘಟಕಗಳಲ್ಲಿ ಬಹುಸಂಖ್ಯಾತ ಘಟಕಗಳು ಸಹ ಬಿಜೆಪಿಯ ’ಹಿಂದೂವಾದಿ’ ಮೂರನೇ ರಂಗ ಸೇರವುದನ್ನು ವಿರೋಧಿಸಿವೆ. ಬಿಜೆಪಿಯ ರಾಜ್ಯ ನಾಯಕತ್ವ ಸಹ ಇದನ್ನು ವಿರೋಧಿಸಿದೆ. ಇದೇ ಸಮಯದಲ್ಲಿ ಎಸ್.ಎನ್.ಡಿ.ಪಿ.ಯ ಒಳಗೆ ನಟೇಶನ್ ಭ್ರಷ್ಟಾಚಾರ, ಕೊಲೆಗಳ ಬಗ್ಗೆ ತೀವ್ರ ಆಪಾದನೆಗಳು ಕೇಳಿ ಬಂದಿವೆ.

ಇದನ್ನು ಟೀಕಿಸುತ್ತಲೇ ಎಲ್.ಡಿ.ಎಫ್. ಸೀಟು ಹಂಚಿಕೆಗಳನ್ನು ಸುಲಲಿತವಾಗಿ ಮಾಡಿ ಹಲವು ಹಂತಗಳ ಪ್ರಣಾಳಿಕೆಗಳನ್ನು ಬುಡುಗಡೆ ಮಾಡಿ ರಭಸದ ಚುನಾವಣಾ ಪ್ರಚಾರಕ್ಕೆ ಇಳಿದಿದೆ. ಎಲ್.ಡಿ.ಎಫ್. ನಾಯಕರು ಗೆಲ್ಲುವ ಭರವಸೆ ಹೊಂದಿದ್ದಾರೆ. ಈ ಚುನಾವಣೆಗಳು ಎಡ-ಪ್ರಜಾಸತ್ತಾತ್ಮಕ ಚಳುವಳಿಯ ಮತ್ತು ಸಿಪಿಐ(ಎಂ) ದೃಷ್ಟಿಯಿಂದ ಬಹಳ ಮಹತ್ವದ ಚುನಾವಣೆ. ನವೆಂಬರ್ 7 ರಂದು ಬಿಹಾರ ಚುನಾವಣೆಯ ಮೊದಲೇ ಇದರ ಮತ ಎಣಿಕೆ ಮುಗಿದು ಫಲಿತಾಂಶ ಬರಲಿದೆ.